Monday 26 December 2011

ಕಾವ್ಯ - poetry



ಈ ಒಂದು ಕೋಣೆ ಸಾರ್



ಈ ಒಂದು ಕೋಣೆ ಸಾರ್
ಅದರಲ್ಲಿರುವ  ಈ ಹಳೆಯ ಈಸಿ
ಚೇರ್
ಇದರಲ್ಲೆ ನಾನು ಕುಳಿತು 
ಜಗತ್ತನ್ನು ಎದುರಿಸುತ್ತಿದ್ದೇನೆ. ಬಾರೀ ಈಸಿಯಾಗಿ ಸಾರ್.


ಬಂಧುಗಳು ಬಂದರೆ  ಸಾರ್
ತಲೆ ಮರೆಸಿಕೊಳ್ಳುತ್ತೇನೆ
ಸಾಲಗಾರರಿಗೆ ಕಿವುಡಾಗುತ್ತೇನೆ
ಮನೆಯವರಿಗೆ
ಇದ್ದರೂ ಇಲ್ಲವಾಗುತ್ತೇನೆ.
ಬುದ್ಧನಿಗೆ ಆದ
ಜ್ಙಾನೋದಯ ಸಾರ್
ಜಗತ್ತಿನ  ಉದ್ದಗಲ ತಲುಪುವುದು ನ್ಯಾಯ ಸಾರ್
ನನ್ನ ಅಜ್ಞಾನೋದಯ
ಈ ಕೋಣೆ ದಾಟದು ಸದ್ಯ ಅಂಗಳಕ್ಕೆ ಕಾಲಿಡದು.


ಈ ಒಂದು  ಕೋಣೆ ಸಾರ್ 
ಪಾತ್ರಗಳು ಬಂದು ಹೋದವು ಇಲ್ಲಿ  ನನ್ನ ಕಥೆಗಳಲ್ಲಿ
ನಾಟಕವಾಗಿ, ಕಾದಂಬರಿಗಳಾಗಿ ತೆರೆಯಿತು ಬದುಕು
ಹಾಗೆಂದು ಸಾರ್  ಬದುಕಿ ಉಸಿರಾಡಿದೆವು ಈ ಕೋಣೆಯಲ್ಲಿ
ಈ ಕೋಣೆ ಸಾರ್ 
ಈ  ಕೋಣೆಯಲ್ಲಿ ಹಿಡಿಸಲಾರದ್ದು 
ಏನೂ ಇಲ್ಲ
ಆಕಾಶದವಕಾಶ
ಕಿಟಕಿಯಿಂದಲೇ ತೂರಿಬಂದರೂ
ಆಶ್ಚರ್ಯವಿಲ್ಲ.

No comments:

Post a Comment